ಚಿತ್ತಾಪುರ: ತರ್ಕಸಪೇಠ್ ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ವಾಡಿ ಪೊಲೀಸರಿಂದ ಆರೋಪಿಯ ಬಂಧನ
ಕಲಬುರಗಿ : ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ತರ್ಕಸಪೇಠ್ ಗ್ರಾಮದಲ್ಲಿ ಜು29 ರಂದು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಡಿ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.. ಸೆ27 ರಂದು ರಾತ್ರಿ 7 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.. ಸೂಗುರು ಎನ್ ಗ್ರಾಮದ ಹಣಮಂತ ಫಕಿರಪ್ಪ ಎಂಬಾತ ತರ್ಕಸಪೇಠ್ ಗ್ರಾಮದ ದೇವಿಂದ್ರಪ್ಪ ಎಂಬುವರ ಮನೆಗೆ ಕನ್ನ ಹಾಕಿ 1.45 ಲಕ್ಷ ರೂ ನಗದು ಹಣ ದೋಚಿಕೊಂಡು ಹೋಗಿದ್ದನು.. ಸದ್ಯ ಆರೋಪಿ ಹಣಮಂತನನ್ನ ಬಂಧಿಸಿರೋ ವಾಡಿ ಪೊಲೀಸರು, 1.20 ಲಕ್ಷ ನಗದು ಹಣ, ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.. ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು