ಯಳಂದೂರು: ಬ್ಯಾಂಕ್ ಗೆ ತೆರಳಿದ್ದ ಪತ್ನಿ- ಮಗಳು ಕಾಣೆ; ಹುಡುಕಿಕೊಡಿ ಎಂದು ಯಳಂದೂರು ಠಾಣೆಗೆ ಪತಿ ದೂರು
ಬ್ಯಾಂಕ್ ಗೆ ಹೋಗುವುದಾಗಿ ತೆರಳಿದ್ದ ಪತ್ನಿ ಹಾಗೂ ಮಗಳು ಕಾಣೆಯಾದ ಘಟನೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ನಡೆದಿದೆ. ಯರಿಯೂರು ಗ್ರಾಮದ ರಾಚಶೆಟ್ಟಿ ಅವರ ಪತ್ನಿ ಆಶಾ(35) ಪುತ್ರಿ ಸಿಂಚನಾ ನಾಪತ್ತೆಯಾದವರು. ಬ್ಯಾಂಕಿಗೆ ಹೋಗುವಾಗಿ ತೆರಳಿದ್ದ ಆಶಾ, ಸಿಂಚನಾ ಅವರು ಮನೆಗೆ ವಾಪಾಸಾಗಿಲ್ಲ ಎಂದು ಯಳಂದೂರು ಠಾಣೆಗೆ ಪತಿ ದೂರು ಪತ್ನಿ , ಮಗಳನ್ನು ಪತ್ತೆ ಹಚ್ಚುವಂತೆ ದೂರು ಕೊಟ್ಟಿದ್ದಾರೆ. ಸದ್ಯ, ಯಳಂದೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾಣೆಯದವರ ಮಾಹಿತಿ ತಿಳಿದರೆ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.