ಚಾಮರಾಜನಗರ: ಅಸನೂರು ದಿಂಬಂ ರಸ್ತೆಯಲ್ಲಿ ಮತ್ತೇ ಮತ್ತೇ ರಸ್ತೆಗಿಳಿಯುತ್ತಿರುವ ಕಾಡಾನೆ: ಟ್ರಾಫಿಕ್ ಜಾಮ್
ಚಾಮರಾಜನಗರ ಜಿಲ್ಲೆಯ ಗಡಿಭಾಗವಾದ ಅಸನೂರು ದಿಂಬಂ ರಸ್ತೆಯಲ್ಲಿ ಕಬ್ಬಿನ ಆಸೆಗೆ ಕಾಡಾನೆಯೊಂದು ರಸ್ತೆಗಿಳಿದಿದೆ. ನಾಲ್ಕೈದು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕರ್ನಾಟಕ ತಮಿಳುನಾಡು ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ಕಾಡಾನೆ ರಸ್ತೆಗಿಳಿಯುತ್ತಿವೆ. ಅಪಾಯದಲ್ಲಿ ಪ್ರಯಾಣಿಕರು ಸಂಚಾರ ಮಾಡ್ತಿದ್ದಾರೆ ಕಾಡಾನೆ ನೋಡಿ ಕೆಲವರು ಹಿಂದಕ್ಕೆ ವಾಪಸ್ ಹೋಗ್ತಿದ್ದಾರೆ ಕಾಡಾನೆಯಿಂದ ನಿತ್ಯ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಅರಣ್ಯ ಇಲಾಖೆಗೂ ಕೂಡ ಕಾಡಾನೆ ತಲೆ ನೋವಾಗಿದೆ.