ರಾಯಚೂರು: ನಗರದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಡೊಳ್ಳು ಬಾರಿಸಿ ಗಮನಸೆಳೆದ ಯುವತಿಯರು
ನಗರದಲ್ಲಿ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಹಿಂದೂ ಮಹಾ ಗಣಪತಿ ವಿಸರ್ಜನಾ ಅಂಗವಾಗಿ ಸೆ.16 ರ ಮಂಗಳವಾರ ಸಂಜೆ 6 ಗಂಟೆಗೆ ಜರುಗಿದ ಶೋಭಾಯಾತ್ರೆಯಲ್ಲಿ ಯುವತಿಯರ ತಂಡ ಡೊಳ್ಳು ಬಾರಿಸಿ ಗಮನ ಸೆಳೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಕೈಗೊಂಡ ಸಮಿತಿ ಅಚ್ಚುಕಟ್ಟಾಗಿ ಮೆರವಣಿಗೆ ನಡೆಸಿತು. ಶೋಭಾಯಾತ್ರೆ ಉದ್ದಕ್ಕೂ ಡಿಜೆ, ಡೊಳ್ಳು, ಸಕಲ ವಾದ್ಯ ಮೇಳಗಳು ಯುವಕರನ್ನು ಹುರಿದುಂಬಿಸಿತು. ಶ್ರದ್ಧಾ ಭಕ್ತಯಿಂದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಕೈಗೊಳ್ಳಲಾಯಿತು. ಮೆರವಣಿಗೆ ಉದ್ದಕ್ಕೂ ಯಾವುದೇ ಅಹಿತಕರ ಘಟನೆ ಜರುಗದಂತೆ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.