ಕಲಬುರಗಿ : ನವೆಂಬರ್ 5 ರಂದು ಕಲಬುರಗಿ ನಗರದ ವಿವಿಧೆಡೆ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ನ4 ರಂದು ಸಂಜೆ 6.30 ಕ್ಕೆ ಜೆಸ್ಕಾಂ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದೆ.. ಹೌಸಿಂಗ್ ಬೋರ್ಡ್ ಫೀಡರ್‌ನ ಗಂಜ್ ಬ್ಯಾಂಕ್ ಕಾಲೋನಿ, ಭವಾನಿ ಗುಡಿ ಸೇರಿದಂತೆ ವಿವಿಧ ಬಡಾವಣೆಗಳು ಮತ್ತು ದರ್ಗಾ ಫಿಡರ್‌ನ ಬಹುಮನಿ ಚೌಕ್, ಸರಾಫ್ ಬಜಾರ್, ಚಪ್ಪಲ್ ಬಜಾರ್, ಸಂತ್ರಾಸವಾಡಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಉಂಟಾಗಲಿದೆ ಅಂತಾ ಜೆಸ್ಕಾಂ ತಿಳಿಸಿದೆ.