ಹಾನಗಲ್: ಹಳೇಕೋಟೆಯಲ್ಲಿ ಅಕ್ರಮ ಜಮೀನು ಪ್ರವೇಶಿಸಿ ಮಾವಿನಮರ ನಾಶಪಡಿಸಿ ಕಳ್ಳತನ ಮಾಡಿದ ಆರೋಪ; ಶಿಗ್ಗಾವಿ ಶಾಸಕ ಪಠಾಣ್ ಸೇರಿ ಐವರ ವಿರುದ್ಧ ಎಫ್ಐಆರ್
Hangal, Haveri | Oct 3, 2025 ಜಮೀನುವೊಂದಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಮಾವಿನ ಮರ ಕಡಿದು ಕಳ್ಳತನ ಮಾಡಿದ ಆರೋಪದಡಿ ಶಿಗ್ಗಾಂವಿ-ಸವಣೂರ ಶಾಸಕ ಯಾಶೀರಖಾನ್ ಪಠಾಣ ಸೇರಿ ಐವರ ವಿರುದ್ಧ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಯಾಶೀರಖಾನ್ ಪಠಾಣ, ಮಖಬುಲ ಅಹ್ಮದಖಾನ ಪಠಾಣ ಹಾಗೂ ಸರ್ವೇ ಇಲಾಖೆ ಮುಖ್ಯ ಅಧಿಕಾರಿ ಜಗದೀಶ ವೈ.ಕೆ., ಎಡಿಎಲ್ ಆರ್ ಸತ್ಯನಾರಾಯಣಪ್ಪ ಡಿ., ತಾಲೂಕು ಸರ್ವೇಯರ್ ಮಂಜುನಾಥ ಮೂಲಿಮನಿ ಸೇರಿ ಐವರ ವಿರುದ್ಧ ದೂರು ದಾಖಲಾಗಿರುವುದು. ಇವರ ವಿರುದ್ಧ ಧಾರವಾಡದ ವಕೀಲ ಫಕ್ಕೀರಗೌಡ ವೀರನಗೌಡ ಪಾಟೀಲ ಎಂಬುವರು ದೂರು ದಾಖಲಿಸಿದ್ದಾರೆ. ಆರೋಪಿತರು ಹಾನಗಲ್ಲ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ನಡೆದಿದೆ.