ಚಾಮರಾಜನಗರ: ಚಾಮರಾಜನಗರ ಬಂದ್ ಹಿನ್ನೆಲೆ ಬಸ್ ಗಾಗಿ ಪ್ರಯಾಣಿಕರ ಪರದಾಟ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಪೀಠದ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆತ ಖಂಡಿಸಿ ದಲಿತ ಸಂಘಟನೆಗಳು, ಎಸ್ಡಿಪಿಐ ಸೇರಿ ವಿವಿಧ ಸಂಘಸಂಸ್ಥೆಗಳು ಚಾಮರಾಜನಗರ ಜಿಲ್ಲಾ ಕೇಂದ್ರ ಬಂದ್ ಗೆ ಕರೆಕೊಟ್ಟು ಪ್ರತಿಭಟನೆ ನಡೆಸುತ್ತಿದ್ದು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾದ್ದರಿಂದ ಪ್ರಯಾಣಿಕರು ಪರದಾಡಿದ್ದು ಶನಿವಾರ ಕಂಡುಬಂದಿತು. ಬೆಳಗ್ಗೆಯಿಂದಲೇ ಪ್ರತಿಭಟನಾಕಾರರು ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿ ಪ್ರತಿಭಟಿಸುತ್ತಿರುವುದರಿಂದ ಸಂತೇಮರಹಳ್ಳಿ ವೃತ್ತದ ಸಮೀಪವೇ ಬಸ್ ನಿಲುಗಡೆಯಾಗುತ್ತಿವೆ. ಬಸ್ ನಿಲ್ದಾಣಕ್ಕೆ ಬಂದವರು ಬಸ್ ಗಳು ಇಲ್ಲದೇ ಕೊಳ್ಳೇಗಾಲ, ಮೈಸೂರು, ನರಸೀಪುರಕ್ಕೆ ತೆರಳಲುವರು ಪರದಾಡಿದರು.