ಬೆಳಗಾವಿ: ಮೋದಗಾ ಗ್ರಾಮದಲ್ಲಿನ 19 ವರ್ಷದ ಯುವತಿ ಕಾಣೆ ನಗರದಲ್ಲಿ ಪತ್ತೆ ಹಚ್ಚಲು ನೆರವಿಗೆ ಪೊಲೀಸರ್ ಮನವಿ
ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದ ಬಸವನಗಲ್ಲಿಯಲ್ಲಿ ವಾಸವಾಗಿದ್ದ 19 ವರ್ಷ ವಯಸ್ಸಿನ ಅನ್ನಪೂರ್ಣ ಶಿವಾನಂದ ದಾನೋಜಿ ಎಂಬ ಯುವತಿಯು ಕಾಣೆಯಾಗಿರುತ್ತಾಳೆ ಎಂದು ಮಾರಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಾಣೆಯಾದ 19 ವರ್ಷ ವಯಸ್ಸಿನ ಯುವತಿಯು 5 ಅಡಿ ಎತ್ತರ, ದುಂಡು ಮುಖ, ನೇರ ಮೂಗು, ಸಾದಾರಣ ಮೈಕಟ್ಟು, ಗೋಧಿಗೆಂಪು ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲಿದ್ದು, ಕನ್ನಡ, ಮರಾಠಿ ಹಿಂದಿ ಭಾಷೆ ಬಲ್ಲವಳಾಗಿರುತ್ತಾಳೆ ಚೂಡಿದಾರ ಧರಿಸಿರುತ್ತಾಳೆ ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರೆತಲ್ಲಿ ಮಾರಿಹಾಳ ಪೋಲಿಸ ಠಾಣೆಯ ಠಾಣಾಧಿಕಾರಿ ಅವರಿಗೆ ಹಾಗೂ ಕಛೇರಿ 9480804111, 9620236343 ಗೆ ಸಂಪರ್ಕಿಸಬಹುದಾಗಿದೆ ಎಂದು ಮಾರಿಹಾಳ ಪೋಲಿಸ ಠಾಣೆಯ ಠಾಣಾಧಿಕಾರಿಗಳು ಇಂದು ಸೋಮವಾರ 5 ಗಂಟೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.