ನಮ್ಮ ಮೆಟ್ರೋ ರೈಲು ಸೇವೆಯ ಮೊದಲ ಗುಲಾಬಿ ರೈಲು ಸೋಮವಾರ ಮುಂಜಾನೆ ಕೊತ್ತನೂರು ಡಿಪೋಗೆ ತಲುಪಿದೆ. ಬಿಎಂಆರ್ಸಿಎಲ್ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪ್ರತಿಷ್ಠಿತ ಬಿಇಎಂಎಲ್ ಸಂಸ್ಥೆ ತಯಾರಿಸಿದ ಈ ರೈಲು, ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗವಾಗಿ 21.25 ಕಿಮೀ ದೂರದ 18 ನಿಲ್ದಾಣಗಳನ್ನು ಸಂಪರ್ಕಿಸಲಿದೆ. ಈ ಮಾರ್ಗದಲ್ಲಿ 6 ಎಲಿವೇಟೆಡ್ ಕಾರಿಡಾರ್ಗಳು ಮತ್ತು 2 ಅಂಡರ್ ಗೌಂಡ್ ಮೆಟ್ರೋ ನಿಲ್ದಾಣಗಳೂ ಇರಲಿವೆ. ವಿಶೇಷವೆಂದರೆ, ಗುಲಾಬಿ ಮಾರ್ಗದ 13.76 ಕಿಮೀ ದೂರದ ಹಾದಿ ಭೂಗತಮಾರ್ಗವಾಗಿದೆ.