ಕಲಬುರಗಿ: ಬಿಸಿಎಂ ಇಲಾಖೆಯಲ್ಲಿ ಅಕ್ರಮ ಆರೋಪ: ತನಿಖೆಗೆ ನಗರದಲ್ಲಿ ಹೋರಾಟಗಾರ ಎಮ್ ಎಸ್ ಪಾಟೀಲ್ ನರಿಬೋಳ ಆಗ್ರಹ
ಕಲಬುರಗಿ : ಬಿಸಿಎಂ ಇಲಾಖೆಯಲ್ಲಿ ಹಾಸ್ಟೆಲ್ಗಳಿಗೆ ಆಹಾರ ಪದಾರ್ಥಗಳ ಸರಬರಾಜು ಮಾಡುವಲ್ಲಿ ಭಾರಿ ಅಕ್ರಮ ನಡೆದಿದ್ದು, ತನಿಖೆ ನಡೆಸುವಂತೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಮ್ ಎಸ್ ಪಾಟೀಲ್ ನರಿಬೋಳ ಆಗ್ರಹಿಸಿದ್ದಾರೆ.. ನ8 ರಂದು ಮಧ್ಯಾನ 2 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಆಹಾರ ಪುರೈಕೆ ಟೆಂಡರ್ ಪಡೆದಿರುವ ಬೆಂಗಳೂರು ಮೂಲದ ಎಜೆನ್ಸಿಯೂ ವಾಹನಗಳಿಗೆ GPRS ಕೂಡಿಸದೇ ನಿಯಮಗಳನ್ನ ಉಲ್ಲಂಘನೆ ಮಾಡ್ತಿದಾರೆಂದು ನರಿಬೋಳ ಹೇಳಿದ್ದಾರೆ.