ದಾವಣಗೆರೆ: ಕ್ರಿಸ್ಮಸ್‌ಗೆ ರಜೆ ನೀಡುವ ಕಾನ್ವೆಂಟ್‌ಗಳು ದಸರಾ ರಜೆ ನೀಡಿಲ್ಲ: ನಗರದಲ್ಲಿ ಜಿಲ್ಲಾ ಶ್ರೀರಾಮ ಸೇನೆ ಆರೋಪ
ದಾವಣಗೆರೆ ನಗರದ ಕಾನ್ವೆಂಟ್‌ಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ರಜೆ ನೀಡುತ್ತಾರೆ ವಿನಹ ಹಿಂದೂಗಳ ದಸರಾ ಹಬ್ಬಕ್ಕೆ ರಜೆ ನೀಡದೆ ಶಾಲೆಗಳನ್ನು ನಡೆಸುತ್ತಿದ್ದಾರೆ ಎಂದು ಜಿಲ್ಲಾ ಶ್ರೀರಾಮ ಸೇನೆ ಆರೋಪಿಸಿದೆ. ಸರ್ಕಾರ ದಸರಾ ಹಬ್ಬದಲ್ಲಿ ಭಾರತೀಯರು ಸಂಭ್ರಮದಿAದ ಭಾಗವಹಿಸಿ ಆಚರಿಸಲಿ ಎಂದು ಶಾಲೆಗಳಿಗೆ ದಸರಾ ರಜೆ ನೀಡಿದ್ದರೂ ದಾವಣಗೆರೆ ನಗರದ ಕಾನ್ವೆಂಟ್‌ಗಳಲ್ಲಿ ಮಕ್ಕಳಿಗೆ ರಜೆ ನೀಡದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿವೆ. ಅದೇ ಕ್ರಿಸ್ಮಸ್ ಹಬ್ಬ ಬಂದರೆ ರಜೆ ನೀಡುವ ಕಾನ್ವೆಂಟ್‌ಗಳು ಹಿಂದೂಗಳ ಸಂಪ್ರದಾಯದ ಹಬ್ಬಗಳ ಸಂದರ್ಭದಲ್ಲಿ ಶಾಲೆಗಳನ್ನು ನಡೆಸುವುದಲ್ಲದೆ ಪರೀಕ್ಷೆಯನ್ನು ಘೋಷಣೆ ಮಾಡಿವೆ. ಇದಲ್ಲದೆ ಕನ್ನಡ ರಾಜ್ಯೋತ್ಸವವನ್ನು ತಿರಸ್ಕಾರ ಮಾಡಿ ಗಾಂಧೀಜಿ, ಅಂಬೇಡ್ಕರ್, ಬಸವಣ್ಣನವರ ಫೋಟೋಗಳನ್ನು ಹಾಕುತ್ತಿಲ್ಲ ಎಂದಿದೆ