ಚಿತ್ರದುರ್ಗ: ರಾಂಪುರ ಬಳಿ ಮಿನಿ ಬಸ್ - ಲಾರಿ ನಡುವೆ ಅಪಘಾತ: ಏಳು ಮಂದಿಗೆ ಗಾಯ
ಶುಕ್ರವಾರ ರಾತ್ರಿ 11 ಗಂಟೆ ವೇಳೆ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾಗಿ, 7 ಮಂದಿಗೆ ಗಾಯಗೊಂಡಿದ್ದು, 3 ಮಂದಿ ಸ್ಥಿತಿ ಗಂಭೀರವಾಗಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಶಿವಮೊಗ್ಗ ಕಡೆಯಿಂದ ಮಂತ್ರಾಲಯ ಕಡೆ ಹೋಗುತ್ತಿದ್ದ ಮಿನಿ ಬಸ್, ಲಾರಿಯನ್ನ ಓವರ್ ಟೆಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿದ್ದ, ಗಾಯಾಳುಗಳನ್ನ ಬಳ್ಳಾರಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ರಾಂಪುರ ಪಿಎಸ್ಐ ಬಾಹುಬಲಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಂಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.