ಶಿಕಾರಿಪುರ: ಅವೈಜ್ಞಾನಿಕ ಟೋಲ್ ಗೇಟ್ ವಿರೋಧಿಸಿ ಶಿಕಾರಿಪುರ ಸಂಪೂರ್ಣ ಬಂದ್
ಅವೈಜ್ಞಾನಿಕ ಟೋಲ್ ಗೇಟ್ ನಿರ್ಮಿಸಿ ತೆರಿಗೆ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಶಿಕಾರಿಪುರ ಬಂದ್ಗೆ ಗುರುವಾರ ಕರೆ ನೀಡಲಾಗಿದೆ. ಬೆಳಗ್ಗೆಯಿಂದಲೇ ಅಲ್ಲಿನ ವ್ಯಾಪಾರಸ್ಥರು ಸಾರ್ವಜನಿಕರು ಸಂಪೂರ್ಣ ಬೆಂಬಲ ಸೂಚಿಸಿದಂತೆ ಕಾಣುತ್ತಿದೆ. ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಂಗಡಿ ಮುಂಗಟ್ಟುಗಳನ್ನ ಮುಚ್ಚುವ ಮೂಲಕ ವ್ಯಾಪಾರಸ್ಥರು ಸಹ ಬಂದ್ಗೆ ಸಹಕಾರ ನೀಡಿದ್ದಾರೆ.