ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗೋದು ಬಿಟ್ಟು ಬರೀ ಕತ್ತಲೆಯಾಗ್ತಿದೆ.. ಹೌದು. ವಿದ್ಯಾರ್ಥಿಗಳು ಬಿಇಡ್ ಪರೀಕ್ಷೆ ಬರೆದು 10 ತಿಂಗಳಾದರೂ ಸಹ ಫಲಿತಾಂಶ ಪ್ರಕಟಿಸದ ಗುಲ್ಬರ್ಗಾ ವಿಶ್ವವಿದ್ಯಾಲಯ ವಿರುದ್ಧ ನಗರದ ಡಿಸಿ ಕಚೇರಿ ಬಳಿ ರಸ್ತೆ ತಡೆದು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.. ಅ30 ರಂದು ಮಧ್ಯಾನ 1.30 ಕ್ಕೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.. ಇನ್ನೂ 10 ತಿಂಗಳನಿಂದ ಫಲಿತಾಂಶ ಸಿಗದೇ ಟಿಇಟಿ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಗಳಿಗೆ ಅರ್ಜಿ ಹಾಕಲು ಸಾಧ್ಯವಾಗ್ತಿಲ್ಲವೆಂದು ಬಿಇಡ್ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ..