ಹನೂರು: ಮಹದೇಶ್ವರ ಬೆಟ್ಟದಲ್ಲಿ ಜೆಡಿಎಸ್ ಶಾಸಕನಿಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ಲಾಘನೀಯ ಮಹಾಪೂರ
ಹನೂರು: ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಜನಸಾಮಾನ್ಯರ ಬದುಕು ಬದಲಾಯಿಸುತ್ತಿವೆ ಎಂಬುದಕ್ಕೆ ಗ್ಯಾರೆಂಟಿ ಯೋಜನೆ ಮುಖೇನಾ ಮತ್ತೊಂದು ದೃಢಸಾಕ್ಷಿ ದೊರೆತಿದೆ. ಎಂದು ಜೆಡಿಎಸ್ನ ಶಾಸಕರಾದ ಮಂಜುನಾಥ್ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರಬೆಟ್ಟದಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರು ಸದ್ಬಳಕೆಯಾಗುತ್ತಿದೆ ಎಂದರೆ ಅದು ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿಯೇ ಜಿಲ್ಲೆಯಎಲ್ಲ ತಾಲೂಕುಗಳಲ್ಲಿಯೂ ಹಿಂದುಳಿದ ವರ್ಗಗಳ ಜನರುಈ ಯೋಜನೆಗಳಿಂದ ತಮ್ಮ ಜೀವನದ ಕಷ್ಟಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ,ಎಂದು ಹಾಡಿ ಹೊಗಳಿದರು