ಸಿಂಧನೂರು: ಸಿಂಧನೂರು : ಅಕ್ರಮ ಮರಳು ಸಾಗಣೆ ಟಿಪ್ಪರ್ ವಶ
ತಾಲ್ಲೂಕಿನ ಹಿರೇಹಳ್ಳದ ಗೊಣ್ಣಿಗನೂರು ಗ್ರಾಮದ ಬಳಿ ಅಕ್ರಮವಾಗಿ ಮರಳು ತುಂಬುತ್ತಿದ್ದ ಟಿಪ್ಪರ್ ಅನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಗುರುವಾರ ರಾತ್ರಿ 11 ಗಂಟೆ 40 ನಿಮಿಷಕ್ಕೆ ಹಿರೇಹಳ್ಳದಲ್ಲಿ ಯಾರೋ ಟಿಪ್ಪರ್‌ನಲ್ಲಿ ಕಳ್ಳತನದಿಂದ ಮರಳು ತುಂಬುತ್ತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಸಿಂಧನೂರು ಠಾಣೆಯ ಸಿಬ್ಬಂದಿಗಳು ದಾಳಿ ನಡೆಸಿ ಟಿಪ್ಪರ್ ವಶಕ್ಕೆ ಪಡೆದರು .ಆದರೆ ಚಾಲಕ ಹಾಗೂ ಮರಳು ತುಂಬುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದು, ಸ್ಥಳದಲ್ಲಿ ಯಾವುದೇ ದಾಖಲೆಗಳಿಲ್ಲದೇ, ಸರಕಾರದ ಪರವಾನಿಗೆಯಿಲ್ಲದೆ ಹಾಗೂ ರಾಯಲ್ಟಿ ತುಂಬದೇ ಕಳ್ಳತನದಿಂದ ಮರಳು ತುಂಬುತ್ತಿದ್ದು, ಟಿಪ್ಪರ್ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.