ರಾಯಚೂರು ಜಿಲ್ಲೆಯ ತಿಂಥಣಿ ಕನಕಗುರು ಪೀಠದ ಮಹಾಸಂಸ್ಥಾನದ ಸ್ವಾಮೀಜಿಗಳಾದ ಶ್ರೀ ಸಿದ್ದರಾಮನಂದ ಸ್ವಾಮೀಜಿ (49) ಅವರು ಇಂದು ಬೆಳಗಿನ ಜಾವ ಬಿಪಿ ಲೋ ದೈವಾಧೀನರಾಗಿದ್ದಾರೆ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಲಿಂಗಸೂಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತೀವ್ರ ಎದೆನೋವು ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀ ಸಿದ್ದರಾಮನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಗ್ರಾಮದವರು. ಮಹದೇವಯ್ಯ ಮತ್ತು ಜಯಮ್ಮ ದಂಪತಿಯ ಎರಡನೇ ಪುತ್ರರಾಗಿ ಜನಿಸಿದ ಅವರು, ಪೂರ್ವಾಶ್ರಮದಲ್ಲಿ ಮೋಹನ್ ಪ್ರಧಾನ ಎಂಬ ಹೆಸರಿನಿಂದ ಪರಿಚಿತರಾಗಿದ್ದರು.