ಕೊಳ್ಳೇಗಾಲ: ಜಾತಿಗಣತಿ ಕುರಿತು ಕೊಳ್ಳೇಗಾಲದಲ್ಲಿ ವಿಶೇಷ ಸಭೆ:
ಶ್ರೀ ಸೋಮನಾಥೇಶ್ವರ ಸ್ವಾಮೀಜಿಗಳಿಂದ ಜಾಗೃತಿ ಕರೆ
ಜಾತಿಗಣತಿ ಸಂಬಂಧಪಟ್ಟಂತೆ ಕೊಳ್ಳೇಗಾಲ ಪಟ್ಟಣದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಮೈಸೂರು ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಸಭೆಯನ್ನು ಏರ್ಪಾಡು ಮಾಡಲಾಗಿತ್ತು.ಈ ವೇಳೆ ಅವರು ಮಾತನಾಡಿ ಜಾತಿಗಣತಿಯು ನಮ್ಮ ಸಮುದಾಯದ ಹಕ್ಕುಗಳ ಪತ್ತೆಗಾಗಿ ಅತ್ಯಂತ ಪ್ರಮುಖವಾದ ಸಾಧನವಾಗಿದೆ. ನಾವೆಲ್ಲರೂ ಜಾತಿಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಅಸ್ತಿತ್ವವನ್ನು ನಿಖರವಾಗಿ ದಾಖಲೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದು ನಮ್ಮ ಶಿಕ್ಷಣ ಉದ್ಯೋಗ ಮತ್ತು ಸರ್ಕಾರದ ಸೌಲಭ್ಯಗಳಲ್ಲಿ ಸಮಪಾಲು ದೊರಕಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಮಾಜದ ಏಳಿಗೆಗಾಗಿ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ. ಒಕ್ಕಲಿಗ ಸಮುದಾಯ ಶ್ರಮಿಕ ಸಮುದಾಯವಾಗಿದೆ ಎಂದರು