ಜೇವರ್ಗಿ: ಪ್ರವಾಹಕ್ಕೆ ಕೊಚ್ಚಿಹೋದ ನರಿಬೋಳ-ಚಾಮನೂರು ಸೇತುವೆ: ಮರುನಿರ್ಮಾಣಕ್ಕೆ ನಗರದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ ಆಗ್ರಹ
ಕಲಬುರಗಿ : ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಿಂದ ಚಾಮನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಭೀಮಾ ನದಿಯಲ್ಲಿನ ಸೇತುವೆ ಪ್ರವಾಹದಿಂದ ಸೇತುವೆಯ ಸ್ಲ್ಯಾಬ್ಗಳು ಕೊಚ್ಚಿಕೊಂಡು ಹೋಗಿದ್ದು, ಇದರಿಂದ ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ತಣ್ಣಿರು ಎರೆಚಲಾಗಿದೆ. ತಕ್ಷಣ ಸೇತುವೆ ಪರಿಶೀಲನೆ ಮಾಡಿ ಮರು ನಿರ್ಮಾಣ ಮಾಡಬೇಕೆಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಆಗ್ರಹಿಸಿದ್ದಾರೆ.. ಅ9 ರಂದು ಮಧ್ಯಾನ 2 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಜೇವರ್ಗಿ-ಚಿತ್ತಾಪುರ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದ್ದು, ಕೂಡಲೇ ರಿಪೇರಿ ಮಾಡಿ ಕಾಮಗಾರಿ ಪೂರ್ಣ ಮಾಡಬೇಕೆಂದು ನರಿಬೋಳ ಆಗ್ರಹಿಸಿದ್ದಾರೆ