ಬಂಗಾರಪೇಟೆ: ಪಟ್ಟಣದ ರೈತರ ತೋಟದಲ್ಲಿ ರೈತ ಸಂಘದಿಂದ ಅರ್ಥ ಪೂರ್ಣ ಪ್ರಜಾಪ್ರಭುತ್ವ ದಿನಾಚರಣೆ
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಕೃಷಿ ಕಾರ್ಮಿಕರಿಗೆ ಗಿಡ ನೀಡಿ ಅರ್ಥಪೂರ್ಣವಾಗಿ ಪ್ರಜಾಪ್ರಭುತ್ವದ ದಿನವನ್ನು ರೈತ ಸಂಘದಿಂದ ಪ್ರಗತಿ ಪರ ರೈತ ಆಂಜಿನಪ್ಪನವರ ತೋಟದಲ್ಲಿ ಸೋಮಾವಾರ ಆಚರಣೆ ಮಾಡಿ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಎಲ್ಲಾ ಕೃಷಿ ಕೂಲಿ ಕಾರ್ಮಿಕರಿಗೂ ಪ್ರಜ್ಞಾವಂತ ಹಿರಿಯರಿಗೂ ದೇಶದ ಭವಿಷ್ಯ ರೂಪಿಸುವ ಯುವ ಜನೆತೆಗೂ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಶುಭಾಷಯಗಳೊಂದಿಗೆ ದೇಶದ ಭವಿಷ್ಯ ಮತ ಚಲಾಯಿಸುವ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಯಾವುದೇ ಕಾರಣಕ್ಕೂ ಮತದಾನದಿಂದ ಯಾರು ಹಿಂದೆ ಸರಿಯಭಾರದು ದೇಶದ ಭವಿಷ್ಯ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಎಂದ್ರು