ಸಾಗರ: ಆನಂದಪುರ ಪೊಲೀಸರಿಂದ ಕಾರ್ಯಾಚರಣೆ, ಗಾಂಜಾ ವಶ
Sagar, Shimoga | Nov 2, 2025 ಸಾಗರ ತಾಲೂಕಿನ ಆನಂದಪುರ ಸಮೀಪದ ತ್ಯಾಗರ್ತಿ ಗ್ರಾಮದ ಹಾರ್ಡ್ ವೇರ್ ಅಂಗಡಿವೊಂದರಲ್ಲಿ ಕಬ್ಬಿಣದ ರಾಕ್ ಮೇಲೆ ಇದ್ದ 4000 ಮೌಲ್ಯದ 37.54 ಗ್ರಾಂ ತೂಕದ ಗಾಂಜಾವನ್ನು ಆನಂದಪುರ ಪೊಲೀಸರು ದಾಳಿ ನಡೆಸಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ವಶಪಡಿಸಿಕೊಂಡಿದ್ದಾರೆ. ಸರ್ಕಲ್ ಇನ್ಸೆಕ್ಟರ್ ಪ್ರವೀಣ್ ಶೆಟ್ಟಿ ನೇತೃತ್ವದ ಮಾರ್ಗದರ್ಶನದಲ್ಲಿ ಆನಂದಪುರ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಗಾಂಜಾವನ್ನ ವಶಪಡಿಸಿಕೊಂಡಿದ್ದು ಈ ಸಂಬಂಧ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ