ಚಿಕ್ಕಬಳ್ಳಾಪುರ: ಮತದಾರರು ಜವಾಬ್ದಾರಿಯಿಂದ ತಮ್ಮ ಮತ ಚಲಾಯಿಸಬೇಕು: ಜಿಲ್ಲಾಡಳಿತ ಭವನದ ಬಳಿ ಉನ್ನತ ಶಿಕ್ಷಣ ಸಚಿವ ಎಂ. ಸಿ ಸುಧಾಕರ್
ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮ ಅಖಂಡ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಸಮ ಸಮಾಜದ ಪಾಲು ಸಿಗಬೇಕು. ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ಸಮಾನ ಅವಕಾಶ, ಹಕ್ಕುಗಳು, ನ್ಯಾಯ, ಸಮಾನತೆ ದೊರೆಯಬೇಕೆಂದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮುಂದುವರೆಯಲೇಬೇಕು. ಇಲ್ಲವಾದಲ್ಲಿ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಮತ್ತು ರಾಜಕೀಯ ತಾರತಮ್ಯ, ಮೇಲು ಕೀಳುಗಳು ಹೆಚ್ಚಾಗಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಸರಿಯುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ 18 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕನ ಹಕ್ಕು. ದೇಶದ ಅಭಿವೃದ್ಧಿಗೆ ನಮ್ಮ ಮತ ನಮ್ಮ ಹಕ್ಕು ನಮ್ಮ ಸಾಂವಿಧಾನಿಕ ಕರ್ತವ್ಯ ಕೂಡ. ನಾವೆಲ್ಲರೂ ಮರೆಯದೆ ನಮ್ಮ ಮತ ಚಲಾಯಿಸಬೇಕು. ನಮ್ಮ ಒಂದು ಮತ ಸದೃಡ ಭಾರತ ನಿರ್ಮಾಣಕ್ಕೆ ಆಧಾರ. ಯಾವುದೆ ಆಮಿಷಕೆ ಒಳಗಾಗದೆ ನಿ