ಬೆಂಗಳೂರು ಉತ್ತರ: ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಲೋಕ ಶಕ್ತಿ ಸಂಘಟನೆ ಆಕ್ರೋಶ, ಕಚೇರಿಯ ಚೇರ್ಗೆ ಬೆಂಕಿ ಹಚ್ಚಲು ಯತ್ನ
ಬಿಬಿಎಂಪಿ ಚುನಾವಣೆ ವಿಳಂಬ ಹಿನ್ನೆಲೆ ಕಾರ್ಪೊರೇಷನ್ ಬಳಿಯ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹೈಡ್ರಾಮವೇ ನಡೀತು. ಮೇ 3ನೇ ತಾರೀಖು 11.30ಕ್ಕೆ ಪಾಲಿಕೆ ಕಚೇರಿಗೆ ಏಕಾಏಕಿ ನುಗ್ಗಿ ಲೋಕ ಶಕ್ತಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಆದಷ್ಟು ಬೇಗ ಚುನಾವಣೆ ನಡೆಸಿದಿದ್ದರೆ ಪಾಲಿಕೆ ಅಧಿಕಾರಿಗಳ ಕುರ್ಚಿಗೆ ಬೆಂಕಿ ಹಚ್ಚೋ ಎಚ್ಚರಿಕೆ ನೀಡಿದ್ದು. ಇನ್ನು ಈ ವೇಳೆ ಭಧ್ರತೆ್ಎ ನಿಯೋಜನೆಗೊಂಡಿದ್ದ ಹಲಸೂರ್ ಗೇಟ್ ಪೊಲೀಸ್ರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ್ರು. ಪಾಲಿಕೆ ಕಚೇರಿಗೆ ನುಗ್ಗಿ ಚೇರ್ ಎಳೆದು ತಂದು ಬೆಂಕಿ ಹಚ್ಚಲು ಮುಂದಾಗಿದ್ದ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಪೊಲೀಸ್ರು ಎಲ್ಲರನ್ನೂ ಬಸ್ ನಲ್ಲಿ ತುಂಬಿಕೊಂಡು ಹೋದ್ರು.