ಸವಣೂರು: ಗುಂಡೂರು ಗ್ರಾಮದಲ್ಲಿ ಸ್ವಚ್ಚತೆಯೇ ಸೇವೆ ಅಭಿಯಾನಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ್ ಚಾಲನೆ
Savanur, Haveri | Sep 20, 2025 ಸವಣೂರ ತಾಲೂಕು ಗುಂಡೂರ ಗ್ರಾಮದಲ್ಲಿ ಸ್ವಚ್ಚತೆಯೇ ಸೇವೆ ಅಭಿಯಾನಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ್ ಚಾಲನೆ ನೀಡಿದರು. ಶನಿವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿದ ಅವರು ಅಭಿಯಾನಕ್ಕೆ ಕೈಜೋಡಿಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇದ್ದರೆ ಯಾವುದೇ ರೋಗರುಜಿನಗಳು ಬರುವುದಿಲ್ಲ. ಹಳ್ಳಿಯಿಂದ ಪಟ್ಟಣದ ವರೆಗೂ ಸ್ವಚ್ಛತಾ ಆಂದೋಲನ ನಡೆಸಬೇಕು. ನಮ್ಮ ಮನೆಯಂತೆಯೇ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.