ಯಡ್ರಾಮಿ: ಮಾಣಶಿವಣಗಿ ಗ್ರಾಮದಲ್ಲಿ ₹12 ಲಕ್ಷ ಮೌಲ್ಯದ 12 ಕೆಜಿ ಗಾಂಜಾ ಜಪ್ತಿ
ಕಲಬುರಗಿ : ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ಜಮೀನಿನಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನ ಜಪ್ತಿ ಮಾಡಿಕೊಂಡಿರೋ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಾಣಶಿವಣಗಿ ಗ್ರಾಮದಲ್ಲಿ ನಡೆದಿದೆ.... ಸೆ20 ರಂದು ಸಂಜೆ 4 ಗಂಟೆಗೆ ಮಾಹಿತಿ ದೊರಕಿದೆ.. ಖಚಿತ ಮಾಹಿತಿ ಮೆರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾಣಶಿವಣಗಿ ಗ್ರಾಮದಲ್ಲಿ ದಾಳಿ ನಡೆಸಿ ಕಾಂತಪ್ಪ ಹಂಚನಾಳ ಎಂಬಾತ ಜಮೀನಿನಲ್ಲಿ ಬೆಳೆದಿದ್ದ ₹12 ಲಕ್ಷ ಮೌಲ್ಯದ ಗಾಂಜಾ ಸಿಜ್ ಮಾಡಿ ಆರೋಪಿ ಕಾಂತಪ್ಪನನ್ನ ಬಂಧಿಸಿದ್ದಾರೆ..