ಹಾಸನ: ಹಾಸನಾಂಬ ಉತ್ಸವದಲ್ಲಿ ಸ್ಥಳೀಯರಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸದಿದ್ದರೆ ಪ್ರತಿಭಟನೆ: ನಗರದಲ್ಲಿ AAP ಜಿಲ್ಲಾಧ್ಯಕ್ಷ ಆಗಿಲೆ ಯೋಗೀಶ್
Hassan, Hassan | Oct 7, 2025 ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ಸ್ಥಳೀಯರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ದೇವಸ್ಥಾನ ಬಾಗಿಲು ತೆರೆಯುವ ದಿನ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಆಪ್ ಜಿಲ್ಲಾಧ್ಯಕ್ಷ ಅಗಿಲೆ ಯೋಗೀಶ್ ಎಚ್ಚರಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನಾಂಬ ಉತ್ಸವ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಮುಖ್ಯಮಂತ್ರಿ ಕೂಡ ನಾಡಹಬ್ಬ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಇದು ಸ್ಥಳೀಯ ಜಾತ್ರೆ, ಹಿಂದಿನಿಂದಲೂ ಸ್ಥಳೀಯರೇ ನಡೆಸಿಕೊಂಡು ಬರುತ್ತಿದ್ದರು.ಇತ್ತೀಚೆಗೆ ದೇವಾಲಯಕ್ಕೆ ಕೋಟ್ಯಂತರ ರೂ. ಆದಾಯ ಬರುತ್ತಿರುವುದರಿಂದ ಈಗ ಸ್ಥಳೀಯರನ್ನೆ ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು.