ಪಾಂಡವಪುರ: ಗುಂಡಿ ಬಿದ್ದು ಕೆಸರ ಗದ್ದೆಯಾಗಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಪಾಂಡವಪುರ ತಾಲ್ಲೂಕು ಚಿಕ್ಕಮರಳಿ ಗ್ರಾಮಸ್ಥರಿಂದ ಪ್ರತಿಭಟನೆ
ಪಾಂಡವಪುರ : ಕಳೆದ 21 ವರ್ಷಗಳಿಂದ ಗುಂಡಿ ಬಿದ್ದು ಕೆಸರು ಗದ್ದೆಯಾಗಿರುವ ಮಂಡ್ಯ ಪಾಂಡವ ಪುರ ಮುಖ್ಯ ರಸ್ತೆ ದುರಸ್ತಿ ಮಾಡದಿರುವ ಲೋಕೋಪ ಯೋಗಿ ಇಲಾಖೆ ಹಾಗೂ ಜಿಲ್ಲಾಡ ಳಿತದ ನಿರ್ಲಕ್ಷ್ಯ ಧೋರಣೆ ಖಂಡಿಸಿ ತಾಲೂಕಿನ ಚಿಕ್ಕಮರಳ್ಳಿ ಗ್ರಾಮ ಸ್ಥರು ಪ್ರತಿಭಟನೆ ನಡೆಸಿ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಮಧ್ಯಾಹ್ನ 3.30ರ ಸಮಯದಲ್ಲಿ ಪಾಂಡವಪುರ– ಮಂಡ್ಯ ಪ್ರಮುಖ ಮಾರ್ಗದ ಚಿಕ್ಕಮರಳ್ಳಿ ಗೇಟ್ ಬಳಿ ರಸ್ತೆಯ ಮಧ್ಯದಲ್ಲೇ ಕುಳಿತು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಜಿಲ್ಲಾಡಳಿತ, ಶಾಸಕರು ಹಾಗೂ ಲೋಕೋಪಯೋಗಿ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.