ಮುಧೋಳ: ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋಧೋಳ ದೇಶಿ ಶ್ವಾನದ ಸಾಹಸ ಸ್ಮರಿಸಿದ ಪ್ರಧಾನಿ ಮೋದಿ
ಮನ್ ಕಿ ಬಾತ್ ನಲ್ಲಿ ಮತ್ತೆ ಮುಧೋಳ ಶ್ವಾನದ ಸಾಧನೆ ಸ್ಮರಿಸಿದ ಪ್ರಧಾನಿ ಮೋದಿ. ಇಂದು ನಡೆದ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ.ಕಳೆದ ಐದು ವರ್ಷ ಹಿಂದೆ ಮನ್ ಕಿ ಬಾತ್ ನಲ್ಲಿ ದೇಶಿ ಶ್ವಾನದ ಬಗ್ಗೆ ಮಾತಾಡಿದ್ದೆ.ನಾನು ಭಾರತೀಯರಿಗೆ ದೇಶಿ ಶ್ವಾನ ಸಾಕಿ ಬೆಳೆಸಿ ಅದನ್ನು ಎಂದು ಹೇಳಿದ್ದೆ. ಅವು ನಮ್ಮ ವಾತಾವರಣ ಹಾಗೂ ಪರಿಸ್ಥಿತಿಗೆ ಹೆಚ್ಚು ಸರಳವಾಗಿ ಹೊಂದಿಕೊಳ್ಳುತ್ತವೆ ಎಂದು ಹೇಳಿದ್ದೆ. ನಮ್ಮ ಸುರಕ್ಷಾ ಏಜೆನ್ಸಿ ಬಗ್ಗೆ ಹೇಳೋದಕ್ಕೆ ನನಗೆ ಖುಷಿ ಆಗುತ್ತದೆ.ಯಾಕೆಂದರೆ ಅವರು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯನ್ನ ಇಟ್ಟಿದ್ದಾರೆ. ಬಿಎಸ್ಎಫ್ ಹಾಗೂ ಸಿಆರ್ಪಿಎಫ್ ನವರು ಭಾರತೀಯ ದೇಶೀಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ ಎಂದರು.