ಕಲಬುರಗಿ: ರೈಲ್ವೆ ಸಿಟಿ ಬಸ್ ನಿಲ್ದಾಣದಲ್ಲಿ ಕ್ಷಣಾರ್ಧದಲ್ಲಿ ವ್ಯಾನಿಟಿ ಬ್ಯಾಗ್ ಕಳ್ಳತನ: ಕಂಗಲಾದ ಮಹಿಳೆ
ಕಲಬುರಗಿ : ಕಲಬುರಗಿ ನಗರದ ರೈಲ್ವೆ ಸಿಟಿ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗ್ ಕಳ್ಳತನವಾದ ಘಟನೆ ನಡೆದಿದ್ದು, ನವೆಂಬರ್ 11 ರಂದು ಬೆಳಗ್ಗೆ 11 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಮಹಾವೀರನಗರ ನಿವಾಸಿ ಶೋಭಾ ಪಾಟೀಲ್ ಎಂಬುವರು ರೈಲ್ವೆ ಸಿಟಿ ಬಸ್ ನಿಲ್ದಾಣದಿಂದ ಕೇಂದ್ರ ಬಸ್ ನಿಲ್ದಾಣದಕ್ಕೆ ಹೋಗುವ ವೇಳೆ ವ್ಯಾನಿಟಿ ಬ್ಯಾಗ್ ಕಳ್ಳತನವಾಗಿದೆ. ಇನ್ನೂ ವ್ಯಾನಿಟಿ ಬ್ಯಾಗ್ನಲ್ಲಿ ₹1.11 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..