ಕಲಬುರಗಿ : ಶಿಕ್ಷಕರೆಂದರೇ ಸಮಾಜದಲ್ಲಿ ಅವರದ್ದೆ ಆದ ಘನತೆ ಗೌರವ ಇರುತ್ತೆ.. ಆದರೆ ಇತ್ತೀಚಿಗೆ ಶಿಕ್ಷಕರು ತಮ್ಮ ಸ್ಥಾನಕ್ಕೆ ಚ್ಯುತಿ ತರ್ತಿದಾರೆ.. ಹೌದು.. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬಾಳ ಗ್ರಾಮದ ಭೀಮ ನಗರದಲ್ಲಿರುವ ಸರ್ಕಾರಿ ಶಾಲೆಗೆ ಮುಖ್ಯೋಪಾಧ್ಯಾಯ ಕಂಠಪೂರ್ತಿ ಕುಡಿದು ಶಾಲೆಗೆ ಬಂದಿದ್ದು, ಇದನ್ನ ಪ್ರಶ್ನಿಸಿದ ಗ್ರಾಮಸ್ಥನಿಗೆ ಉಡಾಫೆ ಉತ್ತರಿಸಿದ ಘಟನೆ ಕಲಬುರಗಿ ನಗರದಲ್ಲಿ ಡಿಸೆಂಬರ್ 19 ರಂದು ನಡೆದಿದ್ದು, ಸಂಜೆ 5 ಗಂಟೆಗೆ ನಡೆದಿದೆ.. ಕುಡಿದು ಬಂದಿದ್ದಿನಿ.. ಏನ್ ಮಾಡ್ತಿಯಾ ಮಾಡಿಕೋ ಅಂತಾ ಗ್ರಾಮಸ್ಥನಿಗೆ ಮುಖ್ಯೋಪಾಧ್ಯಾಯ ಧಮ್ಕಿ ಹಾಕಿದ್ದಾನೆ.. ಅಷ್ಟೇ ಅಲ್ಲ.. ನಾ ಇನ್ನಾರೂ ತಿಂಗಳಲ್ಲಿ ಜೇಬಿನಲ್ಲಿ ರಿವೋಲ್ವರ ಇಟ್ಕೊಳ್ತಿನಿ ಅಂತಾ ಪ್ರಶ್ನೆ ಮಾಡಿದ ವ್ಯಕ್ತಿಗೆ ಆವಾಜ್ ಹಾಕಿದ್ದಾನೆ