ಗದಗ: ಗದಗ ರೈಲ್ವೆ ನಿಲ್ದಾಣಕ್ಕೆ ಪಂ. ಪುಟ್ಟರಾಜರ ಹೆಸರು ನಾಮಕರಣ ಮಾಡಿ: ನಗರದಲ್ಲಿ ಕ್ರಾ.ಸೇ.ಮ.ಜಿ ರಾಣಿ ಚಂದಾವರಿ
Gadag, Gadag | Sep 17, 2025 ಗದಗ ರೈಲ್ವೆ ನಿಲ್ದಾಣಕ್ಕೆ ನಡೆದಾಡುವ ದೇವರು ಅಂಧ, ಅನಾಥರ ಬಾಳಿನ ಬೆಳಕಾಗಿರುವ ಪಂಡಿತ ಪುಟ್ಟರಾಜರ ಹೆಸರನ್ನು ನಾಮಕರಣ ಮಾಡಬೇಕು. ಈ ಹಿಂದೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಹಾಗಾಗಿ ಸೆ. 19 ರಂದು ಭೂಮರೆಡ್ಡಿ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಗುವುದು ಅಂತ ಕ್ರಾಂತಿ ಸೇನಾ ಸಂಘಟನೆಯ ಮಹಿಳಾ ಜಿಲ್ಲಾಧ್ಯಕ್ಷೆ ರಾಣಿ ಚಂದಾವರಿ ಹೇಳಿದರು.