ಕಾಲಗೆರೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿದ್ದು ಸಾರ್ವಜನಿಕರು ಆಕ್ರೋಷ ಹೊರ ಹಾಕಿದ್ದಾರೆ. ಬಾನುವಾರ ಸಂಜೆ 5 ಗಂಟೆಗೆ ದೃಶ್ಯ ಕಂಡು ಬಂದಿದ್ದು ಸಾಂಕ್ರಾಮಿಕ ರೋಗದ ಬೀತಿ ಎದ್ದು ಕಾಣುತ್ತಿದೆ. ಇನ್ನೂ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಅನ್ನ ಚರಂಡಿಯಲ್ಲಿ ಅಳವಡಿಸಿದ್ದು ಅದೂ ಕೂಡ ಒಡೆದು ಹೋಗಿದ್ದು ಕಲುಷಿತ ನೀರು ಕುಡಿಯುವ ನೀರಿನ ಜೊತೆ ಸೇರುತ್ತಿದೆ. ಮನೆಗಳಿಗೆ ಕುಡಿಯುವ ನೀರಿನ ಜೊತೆ ಕಲುಷಿತ ನೀರು ಸಹ ಸೇರುತ್ತಿದ್ದು ರೋಗಗಳು ಹರಡುವ ಬೀತಿಯಲ್ಲಿ ಗ್ರಾಮಸ್ಥರು ಇದ್ದಾರೆ