ಸಿರವಾರ: ವಿದ್ಯಾರ್ಥಿನಿಯರಿಗೆ ಕೌಶಲ್ಯ ತರಬೇತಿ ನೀಡಿದ ನಾಂದಿ ಫೌಂಡೇಶನ್
ಕಳೆದ 11 ದಿನಗಳಿಂದ ಸಿರವಾರ ತಾಲೂಕಿನ ಕವಿತಾಳ ಗ್ರಾಮದಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ವಿವಿಧ ಜೀವನ ಕೌಶಲ್ಯ ತರಬೇತಿ ನೀಡಲಾಯಿತು. ಈ ಒಂದು ತರಬೇತಿ ಕಾರ್ಯಗಾರ ಮಂಗಳವಾರ 4 ಮೂಲಕ ಪಠ್ಯದ ಜೊತೆ ಕೌಶಲ್ಯ ಎಷ್ಟು ಮುಖ್ಯ ಎಂಬ ಬಗ್ಗೆ ನಾಂದಿ ಫೌಂಡೇಶನ್ ನಿಂದ ಆಗಮಿಸಿದ್ದ ಕೌಶಲ್ಯ ತರಬೇತುದಾರರಾದ ನೀಲಕಂಠ ಸ್ವಾಮಿ, ಅರ್ಶಿಯಾ ಆಫ್ರೀನ್ ಮತ್ತು ಎಂ.ಡಿ ರಿಯಾಜ್ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದ್ದಾರೆ. ಕೊನೆಯ ದಿನವಾದ ಇಂದು ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.