ದಾಂಡೇಲಿ: ಕೇಗದಾಳ ಗ್ರಾಮದಲ್ಲಿ ಸಂಪನ್ನಗೊಂಡ ಉಚಿತ ಹೊಲಿಗೆ ತರಬೇತಿ ಶಿಬಿರ
ದಾಂಡೇಲಿ : ಗ್ರಾಮೀಣ ಮಹಿಳೆಯರ ಸ್ವಾವಲಂಬನೆ ಮತ್ತು ಕೌಶಲ್ಯಾಭಿವೃದ್ಧಿ ಉದ್ದೇಶದಿಂದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ, ದಾಂಡೇಲಿ ಮತ್ತು ಟಾಟಾ ಮೋಟರ್ಸ್ ಲಿಮಿಟೆಡ್, ಧಾರವಾಡ ಇವರ ಸಂಯುಕ್ತ ಆಶ್ರಯದಡಿ ತಾಲೂಕಿನ ಕೇಗದಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಅವಧಿಯ ಉಚಿತ ಹೊಲಿಗೆ ತರಬೇತಿ ಶಿಬಿರವು ಬುಧವಾರ ಸಂಜೆ 5.30 ಗಂಟೆ ಸುಮಾರಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ದಾಂಡೇಲಿ ಶಾಖೆಯ ಯೋಚನಾಧಿಕಾರಿ ಸಂಜೀವ್ ಜೋಶಿ ಅವರು ವಹಿಸಿ, ತರಬೇತಿ ಪಡೆದ ಎಲ್ಲಾ ಶಿಬಿರಾರ್ಥಿಗಳು ಸ್ವತಂತ್ರ ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು.