ಕೃಷ್ಣರಾಜಪೇಟೆ: ಪಟ್ಟಣದ ದೇವಿರಮ್ಮಣ್ಣೆ ಕೆರೆಯ ಬಳಿ ಮಹಿಳೆ ಬಳಿ ಮಾಂಗಲ್ಯ ಸರ ಕಸಿದು ಪರಾರಿ
ಕೆ. ಆರ್. ಪೇಟೆ: ಮಹಿಳೆ ಬಳಿ ಮಾಂಗಲ್ಯ ಸರ ಕಸಿದು ಪರಾರಿ ಕೆ. ಆರ್. ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಗೌರಮ್ಮ ಎಂಬ ಮಹಿಳೆಯಿಂದ ₹ 70 ಸಾವಿರ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಸಿದುಕೊಂಡು ಪರಾರಿಯಾಗಿದ್ದಾನೆ. ಅಗ್ರಹಾರದ ನಿವಾಸಿ ನಾಗರಾಜೇಗೌಡ ಅವರ ಪತ್ನಿ ಗೌರಮ್ಮ ಅವರು ಕೆರೆಯ ಬಳಿ ಬಟ್ಟೆ ತೊಳೆಯುತ್ತಿದ್ದಾಗ, ಕೈಕಾಲು ತೊಳೆಯುವ ನೆಪದಲ್ಲಿ ಹತ್ತಿರ ಬಂದ ದುಷ್ಕರ್ಮಿ, ಅವರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಗೌರಮ್ಮ ಅವರು ಗುರುವಾರ ಬೆಳಿಗ್ಗೆ 11 ಗಂಟೆಯಲ್ಲಿ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.