ಶೋರಾಪುರ: ಸರಕಾರ ಪ್ರತಿ ಎಕರೆಗೆ 50 ಸಾವಿರ ರೂಪಾಯಿಗಳ ಪರಿಹಾರ ಘೋಷಿಸಲು ನಗರದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹ
ನೆರೆ ಹಾವಳಿಯಿಂದ ಕಲ್ಯಾಣ ಕರ್ನಾಟಕ ಭಾಗದ ರೈತರು ತುಂಬಾ ತೊಂದರೆಗೆ ಸಿಲುಕಿದ್ದು ನಾಗರಿಕ ಸರಕಾರಗಳು ಇಂತಹ ಸಂದರ್ಭದಲ್ಲಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿಗಳ ಪರಿಹಾರ ಸರ್ಕಾರ ಘೋಷಿಸಬೇಕು ಎಂದು ಸುರ್ಪುರ ನಗರದ ಸತ್ಯಂಪೇಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಒತ್ತಾಯಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಈ ಕುರಿತು ಹೇಳಿಕೆ ನೀಡಿ, ರೈತ ಈಗಾಗಲೇ ಬೆಳೆ ಕಳೆದುಕೊಂಡು ತುಂಬಾ ತೊಂದರೆಯಲ್ಲಿದ್ದು ಇಂತಹ ಸಂದರ್ಭದಲ್ಲಿ ಸರಕಾರ ವಿಳಂಬ ಮಾಡದೆ ಪರಿಹಾರ ಘೋಷಿಸಿದಲ್ಲಿ ರೈತನಿಗೆ ಧೈರ್ಯ ಬರಲಿದೆ.ಆದ್ದರಿಂದ ಕೂಡಲೇ ಸರ್ಕಾರ ಪರಿಹಾರ ಘೋಷಿಸುವಂತೆ ಒತ್ತಾಯಿಸಿದ್ದಾರೆ.