ಬಳ್ಳಾರಿ: ನಗರದಲ್ಲಿ ಕಳೆದುಕೊಂಡ ಮೊಬೈಲ್ಗಳು ಪತ್ತೆ, ವಾರಸುದಾರರಿಗೆ ಹಸ್ತಾಂತರ
ಅ.20,ಸೋಮವಾರ ಸಂಜೆ 4ಕ್ಕೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆ ಹಾಗೂ ಕೌಲ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಹಲವಾರು ಮೊಬೈಲ್ ಫೋನ್ಗಳನ್ನು CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿ, ಮೊಬೈಲ್ ಮಾಲೀಕರಿಗೆ ಪೊಲೀಸರು ಹಸ್ತಾಂತರಿಸಿದರು. ಪೊಲೀಸ್ ಇಲಾಖೆಯ ಈ ಕ್ರಮದಿಂದ ಮೊಬೈಲ್ ಕಳೆದುಕೊಂಡ ನಾಗರಿಕರಿಗೆ ಸಂತೋಷ ವ್ಯಕ್ತವಾಯಿತು. CEIR ಪೋರ್ಟಲ್ ಮೂಲಕ ಮೊಬೈಲ್ಗಳ IMEI ಸಂಖ್ಯೆಯ ಆಧಾರದ ಮೇಲೆ ಪತ್ತೆಹಚ್ಚಿ, ತನಿಖಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾಲೀಕರಿಗೆ ಹಿಂತಿರುಗಿಸಲಾಯಿತು.