ವಡಗೇರಾ: ಬೆಳೆ ಹಾನಿ ವೀಕ್ಷಣೆಗೆ ಆಗಮಿಸಿದ ಸಚಿವ ಶರಣಬಸಪ್ಪಗೌಡಗೆ ಹಾಲಗೇರ ಗ್ರಾಮದಲ್ಲಿ ಕರವೇ ಮನವಿ,ಎಕರೆಗೆ 50 ಸಾವಿರ ಪರಿಹಾರ ನೀಡುವಂತೆ ಆಗ್ರಹ
ಮಹಾಮಳೆಯಿಂದ ಭೀಮ ನದಿ ನೀರು ಭಾರಿ ಪ್ರಮಾಣದಲ್ಲಿ ಹರಿದು ಬಂದು ವಡಿಗೇರ ತಾಲೂಕಿನ ಹಲವು ಗ್ರಾಮಗಳ ರೈತರ ಬೆಳೆ ಹಾನಿಯಾಗಿದ್ದು ಭಾನುವಾರ ಮಧ್ಯಾನ ಬೆಳೆ ಹಾನಿ ಪ್ರದೇಶ ವೀಕ್ಷಣೆಗೆ ಆಗಮಿಸಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಪುರ ಹಾಗೂ ಯಾದಗಿರಿಯ ಶಾಸಕ ಚನ್ನ ರೆಡ್ಡಿ ಪಾಟೀಲ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ವಡಿಗೇರ ತಾಲೂಕ ಅಧ್ಯಕ್ಷ ಅಬ್ದುಲ್ ಚಿಗಾನೂರ ನೇತೃತ್ವದಲ್ಲಿ ಅನೇಕ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.