ಅಫಜಲ್ಪುರ: ಸೊನ್ನ ಬ್ಯಾರೇಜ್ ಮೂಲಕ ಭೀಮಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ನವರಾತ್ರಿ ವೇಳೆ ಜನರಿಗೆ ಸಂಕಷ್ಟ
ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾದರು ಸಹ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಮತ್ತೆ ಭೀಮಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರನ್ನ ಸೊನ್ನ ಬ್ಯಾರೇಜ್ ಮೂಲಕ ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.. ಅ1 ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ದೊರಕಿದೆ.. ಮಹಾರಾಷ್ಟ್ರದ ಬೋರಿಹಳ್ಳ ಜಲಾಶಯ, ಸೀನಾ ಜಲಾಶಯ, ಉಜ್ಜನಿ ಜಲಾಶಯಗಳಿಂದ 3.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.. ನಾಲ್ಕು ತಾಲೂಕಿನ 80 ಕ್ಕೂ ಅಧಿಕ ಗ್ರಾಮಗಳಲ್ಲಿ ಮತ್ತೆ ರಣಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ