ಶಿಕಾರಿಪುರ: ಅವೈಜ್ಞಾನಿಕ ಟೋಲ್ ಗೇಟ್ ವಿರೋಧಿಸಿ ನಾಳೆ ಶಿಕಾರಿಪುರ ಬಂದ್ ಗೆ ಸಕಲ ಸಿದ್ಧತೆ
ಅವೈಜ್ಞಾನಿಕ ಟೋಲ್ ಗೇಟ್ ವಿರೋಧಿಸಿ ನಾಳೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಶಿಕಾರಿಪುರ ತಾಲೂಕು ಬಂದ್ಗೆ ಕರೆ ನೀಡಲಾಗಿದ್ದು, ಶಿಕಾರಿಪುರ ತಾಲೂಕಿನಾದ್ಯಂತ ಬಂದ್ ಗೆ ಸಕಲ ಸಿದ್ಧತೆಯನ್ನ ಕೈಗೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಕುಟ್ರಹಳ್ಳಿ ಬಳಿ ನಿರ್ಮಿಸಿರುವ ಅವೈಜ್ಞಾನಿಕ ಟೋಲ್ ಗೇಟ್ ವಿರೋಧಿಸಿ ಹೋರಾಟವನ್ನು ನಡೆಸುತ್ತಿದ್ದು,ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ನಾಳೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಶಿಕಾರಿಪುರ ತಾಲೂಕು ಬಂದ್ಗೆ ಕರೆ ನೀಡಲಾಗಿದೆ ಎಂದು ಬುಧವಾರ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಜ್ ಪಾಟೀಲ್ ತಿಳಿಸಿರುತ್ತಾರೆ.