ದಾಂಡೇಲಿ: ದೀಪಾವಳಿ ಹಬ್ಬದ ನಿಮಿತ್ತ ನಗರದೆಲ್ಲೆಡೆ ರೈತರಿಂದ ಕಬ್ಬು, ಬಾಳೆ ಗಿಡಗಳ ಭರ್ಜರಿ ಮಾರಾಟ
ದಾಂಡೇಲಿ : ಹಿಂದೂ ಧರ್ಮೀಯರ ಅತ್ಯಂತ ಪವಿತ್ರ ಹಾಗೂ ಸಂಭ್ರಮ, ಸಡಗರದ ಹಬ್ಬವಾದ ದೀಪಾವಳಿ ಹಬ್ಬದ ನಿಮಿತ್ತವಾಗಿ ದಾಂಡೇಲಿ ನಗರದೆಲ್ಲೆಡೆ ಸ್ಥಳೀಯ ಹಳ್ಳಿಯ ರೈತರು ತಾವು ಬೆಳೆದ ಕಬ್ಬು ಹಾಗೂ ಬಾಳೆ ಗಿಡಗಳು ಮತ್ತು ಹೂ ಸಮೇತವಿರುವ ಗೊಂಡೆ ಹೂವಿನ ಗಿಡಗಳನ್ನು ಎಂದಿನಂತೆ ಈ ಬಾರಿಯೂ ಮಾರಾಟಕ್ಕೆ ತಂದಿದ್ದು ಭರ್ಜರಿ ಮಾರಾಟವಾಗತೊಡಗಿದೆ. ದೀಪಾವಳಿ ಹಬ್ಬದ ನಿಮಿತ್ತ ಪ್ರತಿ ಮನೆಗಳಲ್ಲಿ ಅಂಗಡಿ - ಮುಂಗ್ಗಟ್ಟುಗಳಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತಿರುವುದರಿಂದ ಪೂಜೆಗೆ ಅತೀ ಅವಶ್ಯವಾಗಿ ಕಬ್ಬು ಬಾಳೆ ಗಿಡ ಮತ್ತು ಹೂ ಸಮೇತವಿರುವ ಗೊಂಡೆ ಹೂವಿನ ಗಿಡಗಳು ಬೇಕಾಗಿರುವುದರಿಂದ, ನಗರದ ಸುತ್ತಮುತ್ತಲ ರೈತರು ಸೋಮಾನಿ ವೃತ್ತ, ಬರ್ಚಿ ರಸ್ತೆ, ಲಿಂಕ್ ರಸ್ತೆ, ಸಂಡೆ ಮಾರ್ಕೆಟ್ ಮೊದಲಾದ ಕಡೆ ಭರ್ಜರಿ ಮಾರಾಟ ಮಾಡುತ್ತಿದ್ದಾರೆ.