ಸಿಂದಗಿ: ಸಿಂದಗಿ: ಡಂಬಳ ತಾಂಡಾದ ಹೊಲದಲ್ಲಿ ಗುಡಸಲಿಗೆ ಬೆಂಕಿ: ಗುಡಿಸಲು ಬಸ್ಮ, 17 ಕುರಿಗಳ ಸಾವು
ಸಿಂದಗಿ ತಾಲೂಕಿನ ಡಂಬಳ ತಾಂಡಾದ ಕಾಂತವ್ವ ರಾಠೋಡ ಅವರ ತೋಟದಲ್ಲಿನ ಗುಡಸಲಿಗೆ ವಿದ್ಯುತ್ ಸಾರ್ಟ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ ಹಿನ್ನಲೆಯಲ್ಲಿ ಗುಡಸಲಗಿಗೆ ಬೆಂಕಿ ತಗುಲಿ ಗುಡಿಸಲು ಸುಟ್ಟಿದೆ. ಪಕ್ಕದ ಕುರಿ ಸೇಡ್ಗೆ ಬೆಂಕಿ ತಗುಲಿ ಅಲ್ಲಿದ 17 ಕುರಿಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನಾ ಸ್ಥಳಕ್ಕೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಬಿಜೆಪಿ ಸಿಂದಗಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಬೇಟಿ ನಿಡಿ ಕಾಂತವ್ವ ರಾಠೋಡ ಅವರಿಗೆ ಸಾಂತ್ವಾನ ಹೇಳಿ ಹಾನಿಗೆ ಸರ್ಕಾರದಿಂದ ಪರಿಹಾರ ಮಂಜೂರು ಮಾಡಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ತಾಲೂಕಾಧಿಕಾರಿ ಡಾ.ಮಾರುತಿ ತಡವಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಹಾದೇವ ರಾಠೋಡ ರಾಜುಗೌಡ ಪಾಟೀಲ ಶರಣಗೌಡ ಪಾಟೀಲ ಮಹೇಶ ಹುರಕಡ್ಲಿ ಇದ್ದರು.