ಉದನೂರ ಗ್ರಾಮದಿಂದ ನಂದಿಕೂರ ಗ್ರಾಮಕ್ಕೆ ಹೋಗುವ ಸಾರ್ವಜನಿಕ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಜೂಜಾಡುತ್ತಿರಜವ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ ಹಾಗೂ ಸಿಬ್ಬಂದಿ ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ. ಶಿವಶರಣಪ್ಪ ಯಮಂಟಿ, ಶಿವರಾಜ ಬಿರಾದಾರ, ಮಹಾಂತಪ್ಪ ಅಲ್ಲಾಪೂರ, ಲಕ್ಷ್ಮೀಕಾಂತ ಧಂಗಾಪೂರ, ಮಲ್ಲಿಕಾರ್ಜುನ ಕಪನೂರ, ಶರಣಪ್ಪ ಸಿರಸಗಿ, ಜೈಭೀಮ ಕೊರಳ್ಳಿ ಎಂಬುವವರನ್ನು ಬಂಧಿಸಿ 17,320 ರೂ.ನಗದು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬುಧವಾರ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ..