ರಾಯಚೂರು: ನಗರದ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಟೈಲ್ಸ್ ಛಿದ್ರ ಛಿದ್ರ; ಕಳಪೆ ಕಾಮಗಾರಿಗೆ ಸಾಕ್ಷಿಯಾದ ಸಬ್ ರಜಿಸ್ಟರ್ ಆಫೀಸ್
ನಗರ ಹೊರವಲಯದಲ್ಲಿರುವ ನೂತನ ಜಿಲ್ಲಾಡಳಿತ ಭವನದಲ್ಲಿರುವ ರಾಯಚೂರು ಜಿಲ್ಲಾ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಹೊಸದಾಗಿ ಹಾಕಲಾದ ಟೈಲ್ಸ್ ಗಳು ಛಿದ್ರ ಛಿದ್ರಗೊಂಡಿವೆ. ಟೈಲ್ಸ್ ಹಾಕಿ ಒಂದು ವರ್ಷವೂ ಕಳೆದಿಲ್ಲ ಆಗಲೇ ನೆಲಕ್ಕೆ ಹಾಸಲಾದ ಟೈಲ್ಸ್ ಹೊಡೆದು ಹೋಗುತ್ತಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ನಾಗರಿಕರಾದ ತ್ರಿವಿಕ್ರಮ್ ಆಪಾದಿಸಿದ್ದಾರೆ. ಈ ಕುರಿತು ಬುಧವಾರ ಪ್ರಕಟಣೆ ನೀಡಿದ ಅವರು, ನೂತನ ಜಿಲ್ಲಾಡಳಿತ ಭವನದ ಬಲಬದಿಯಲ್ಲಿರುವ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಗೋಡೆಗಳ ಮೇಲ್ಪದರ ಕಿತ್ತು ಬಿದ್ದಿದೆ. ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.