ಹಳಿಯಾಳ: ತತ್ವಣಗಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯತ್ ಸಭಾಭವನದ ಉದ್ಘಾಟನೆ
ಹಳಿಯಾಳ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಕಾರವಾರ, ತಾಲೂಕ ಪಂಚಾಯತ್ ಹಳಿಯಾಳ ಹಾಗೂ ಗ್ರಾಮ ಪಂಚಾಯತ್ ತತ್ವಣಗಿ ಇವರ ಸಹಯೋಗದಲ್ಲಿ 2015-16ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ ಅಂದಾಜು ₹15 ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ನೂತನ ಗ್ರಾಮ ಪಂಚಾಯತ್ ಸಭಾಭವನವನ್ನು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಸಕರಾದ ಆರ್.ವಿ.ದೇಶಪಾಂಡೆಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ವಿ ದೇಶಪಾಂಡೆಯವರು ನೂತನ ಸಭಾಭವನ ನಿರ್ಮಾಣದಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಜನತೆಗೆ ವಿವಿಧ ಸರ್ಕಾರದ ಯೋಜನೆಗಳ ಕುರಿತು ಸಭೆಗಳು, ತರಬೇತಿಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗಲಿದೆ ಎಂದರು.