ಕೊಪ್ಪ: ಆಸ್ಪತ್ರೆ ಕಟ್ಟಡ ಮಾತ್ರ ಉದ್ಫಾಟಿಸಬೇಡಿ, ಸೇವೆಗೆ ಸಿಬ್ಬಂದಿಗಳನ್ನು ನೇಮಿಸಿ.! ಜಯಪುರ ಸಮುದಾಯ ಆಸ್ಪತ್ರೆ ಹೋರಾಟ ಸಮಿತಿ ಒತ್ತಾಯ.!
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನ 12 ರಿಂದ 14 ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದೆ. ಆದರೆ ಈ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಯ ದಿನಾಂಕವನ್ನು 2 ರಿಂದ 3 ಬಾರಿ ಮುಂದೂಡಲಾಗಿದ್ದು ಇದೀಗ ಅಕ್ಟೋಬರ್ 7ಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಆಸ್ಪತ್ರೆಯ ಕಟ್ಟಡ ಉದ್ಘಾಟನೆ ಆಗುತ್ತಿರುವುದು ಮೇಗುಂದ ಹೋಬಳಿಯ ಬಡ ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯ. ಆದರೆ ಸೇವೆಗೆ ತಕ್ಕ ಸಿಬ್ಬಂದಿಗಳನ್ನು ಸಹ ನೇಮಿಸಬೇಕು ಇಲ್ಲದಿದ್ದರೆ ಹೋರಾಟವನ್ನು ನಡೆಸಲಾಗುವುದು ಎಂದು ಜಯಪುರ ಸಮುದಾಯ ಆಸ್ಪತ್ರೆ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.