ಗೋಕಾಕ: ಪಟ್ಟಣದಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ
Gokak, Belagavi | Sep 17, 2025 ಪಟ್ಟಣದಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ. ಬಾಬು ನದಾಪ್ ಅವರು ಮನೆಗೆ ಹೋಗುವ ದಾರಿ ಕೆಸರು ಇದ್ದ ಹಿನ್ನೆಲೆ ನಿಧಾನವಾಗಿ ಹೋದರೆ ಬೈಕ್ ಹೋಗುವುದಿಲ್ಲ, ಆದ್ದರಿಂದ ವೇಗವಾಗಿ ಹೋಗುತ್ತಿದ್ದಾಗ ಪಕ್ಕದ ಬೈಕಿಗೆ ತಾಗದಿದ್ದರೂ ಸಹ ವಿನಾಕಾರಣ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಗೋಕಾಕ ಪಟ್ಟಣದಲ್ಲಿ ವೇಗವಾಗಿ ಬೈಕ್ ಚಲಾಯಿಸಿ ಕಟ್ ಹೊಡೆದಿದ್ದಕ್ಕೆ ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಗೋಕಾಕ್ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ