ವಡಗೇರಾ: ಭೀಮಾ ನದಿ ಹಿನ್ನೀರಿಗೆ ಹಾಲಗೇರಾ, ಶಿವನೂರ ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆ ನಷ್ಟ, ಬಿಜೆಪಿ ಮುಖಂಡ ಮಹೇಶ ರೆಡ್ಡಿ ಭೇಟಿ
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಹಾಲಗೇರಾ, ಶಿವನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದಿರುವ ಹತ್ತಿ ಭತ್ತ ಸೇರಿ ವಿವಿಧ ಬೆಳೆಗಳು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾಗಿವೆ. ಅಲ್ಲದೆ ಭೀಮ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ನದಿಯ ಹಿನ್ನೀರಿನಿಂದಾಗಿ ರೈತರ ಜಮೀನಿನಲ್ಲಿ ಬೆಳೆಗಳು ಜಲಾವೃತವಾಗಿ ದೊಡ್ಡಮಟ್ಟದಲ್ಲಿ ನಷ್ಟ ಉಂಟಾಗಿದೆ. ಈ ಗ್ರಾಮಗಳ ರೈತರ ಬೆಳೆ ಹಾನಿ ಪ್ರದೇಶಕ್ಕೆ ಬಿಜೆಪಿ ಮುಖಂಡ ಮಹೇಶ್ವರ ರೆಡ್ಡಿ ಮುದ್ನಾಳ ಭೇಟಿ ನೀಡಿ ವೀಕ್ಷಿಸಿ ಸರ್ಕಾರ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.