ಹಳಿಯಾಳ : ಯಾವುದೇ ಪರವಾನಿಗೆ ಇಲ್ಲದೇ ಪಟ್ಟಣದ ಮೇದಾರಗಲ್ಲಿ ಮತ್ತು ಕುಂಬಾರಗಲ್ಲಿಯ ತಾಲಿಮ್ ಕೂಟ್ ನಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ 'ದಿ ಕಿಂಗ್ ಆಪ್ ಟೈಗರ್ ' ಎಂದು ಬರೆದ ಬ್ಯಾನರ್ ಒಂದು ವಿವಾದಕ್ಕೆ ಕಾರಣವಾದ ಘಟನೆ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ. ಬಸ್ ನಿಲ್ದಾಣಕ್ಕೆ ಸಾಗುವ ಮುಖ್ಯ ರಸ್ತೆಯಲ್ಲಿರುವ ಮೇದಾರಗಲ್ಲಿ, ಕುಂಬಾರಗಲ್ಲಿ ಮತ್ತು ಗಣಪತಿ ಗಲ್ಲಿಯ ಮೂರು ಗಲ್ಲಿಗಳು ಕೂಡುವ ತಾಲೀಮ್ ಕೂಟ್ ನಲ್ಲಿಯ ವಿದ್ಯುತ್ ಕಂಬಕ್ಕೆ ಸಾರ್ವಜನಿಕವಾಗಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ದೊಡ್ಡ ಗಾತ್ರದ ಕಟೌಟ್ (ಬ್ಯಾನರ್) ಅನ್ನು ತೆರವುಗೊಳಿಸುವಂತೆ ಪುರಸಭೆಗೆ ಮೌಖಿಕವಾಗಿ ಹಿಂದೂ ಸಂಘಟನೆಗಳವರು ಮತ್ತು ಸಾರ್ವಜನಿಕರು ದೂರು ನೀಡಿದ್ದರೆಂದು ತಿಳಿದುಬಂದಿದೆ.