ನಾಗಮಂಗಲ: ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಸರಗಳವು ಮಾಡಿದ್ದ ಇಬ್ಬರ ಬಂಧನ
ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಸರಗಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ 20.6 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕು ಬನ್ನಿಸೆರೆಗ ಬಡಾವಣೆಯ ಗೋಪಾಲ ಬಿನ್ ಚನ್ನಪ್ಪ (34) ಹಾಗೂ ಮಲ್ಲಿಕಾರ್ಜುನ ಬಿನ್ ಲೇಟ್ ರವಿ (29) ಬಂಧಿತ ಆರೋಪಿಗಳು. ಕಳೆದ ಸೆ.2 ರಂದು ಮಧ್ಯಾಹ್ನ 2-15 ಗಂಟೆಯ ಸಮಯದಲ್ಲಿ ನಾಗಮಂಗಲ ತಾಲ್ಲೂಕಿನ ಸಾತೇನಹಳ್ಳಿ ಗ್ರಾಮದ ಕೆರೆಯ ದಾರಿಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಶೋಭ ಅವರ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ಚಿನ್ನದ ಮಾಂಗಲ್ಯ ಸರ ಅಪಹರಿಸಿದ್ದರು.